ವಾರದ ಕವಿತೆ

ಕವಿತೆ ನಿದ್ದೆ ಬರುತ್ತಿಲ್ಲ! ಕಾತ್ಯಾಯಿನಿ ಕುಂಜಿಬೆಟ್ಟು ನಿದ್ದೆ ಬರುತ್ತಿಲ್ಲ!ಆದರೆ…ನಿದ್ದೆ ಮಾಡದಿದ್ದರೆಒಳಗಿರುವ ಆತ್ಮಿಣಿ ಅಲಂಕರಿಸಿಕೊಂಡುಶತಪಥ ಸುತ್ತುತ್ತಾಳೆ ಪಂಜರದ ಗಿಳಿಯಂತೆಹೊರಹಾದಿ ಅರಸುತ್ತ! ಆಗ…ಪಕ್ಕದಲ್ಲಿರುವ ಪುರುಷಾಕಾರಲಂಘಿಸಿ ರಾವಣನಾಗುತ್ತದೆನನ್ನನ್ನು ಅಪಹರಿಸಿ ಅಶೋಕವನದಲ್ಲಿಡಲು!ಅಥವಾ…ಗುಟುರು ಹಾಕುತ್ತ ರಕ್ಕಸನಾಗುತ್ತದೆಹೊತ್ತೊಯ್ದು ಏಳುಕೋಟೆಯೊಳಗೆಬಂಧಿಸಿಡಲು! ನಿದ್ದೆಯೇ ಬಾರದಿದ್ದರೆನಾನು ಸೀತೆಯಾಗಬೇಕಾಗುತ್ತದೆ!ಆಗ…ಕನಸುಗಳನ್ನು ಹತ್ತುತಲೆಗಳಇಪ್ಪತ್ತು ಕಣ್ಣುಗಳುನೋಟದಲ್ಲೇ ಬೂದಿ ಮಾಡುತ್ತವೆಹತ್ತು ಮೂಗುಗಳು ಇಪ್ಪತ್ತು ಕಿವಿಗಳುಕಿಟಕಿ ಕಿಂಡಿಗಳಾಗಿಹೋದೆಯ ಪಿಶಾಚಿ ಎಂದರೆಬಂದೆ ನಾ ಗವಾಕ್ಷಿಯಲ್ಲಿ! ಎಂದರಚುತ್ತಹತ್ತು ದಳಬಾಯಿಗಳುಕೋಟೆಯ ಮಹಾದ್ವಾರಗಳಾಗಿಅಶೋಕವನದ ಮರಗಳನ್ನುಹೊರದೂಡುತ್ತವೆಅವು ಎಲೆಗಳ ಕಣ್ಣುಗಳನ್ನುಗಾಳಿಗೆ ಮುಚ್ಚಿ ತೆರೆಯುತ್ತಕಣ್ಸನ್ನೆಯಲ್ಲೇಕೋಟೆಯ ಹೊರಗಿಂದಲೇಬಾ ಬಾ ಎಂದು ಬಳಿಕರೆಯುತ್ತವೆ ಶೋಕಿಸಲು ಅಶೋಕವನದಆ ಮರ ಇಲ್ಲವಾದರೆಸೀತೆ ಸೀತೆಯೇ ಅಲ್ಲ!ರಾಮರಾಮರಾಮರಾ… … Continue reading ವಾರದ ಕವಿತೆ